• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜಕೀಯ

ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ: ಸಿಎಂ ಸಿದ್ದರಾಮಯ್ಯ

ವಿವಿಧ ಜಾತಿ, ಧರ್ಮ, ಭಾಷೆಗಳಿಂದ ಕೂಡಿರುವ ನಮ್ಮ ಸಮಾಜದಲ್ಲಿ ಮನುಜರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕಿದೆ.

by Dynamic Leader
01/02/2026
in ರಾಜಕೀಯ
0
0
SHARES
0
VIEWS
Share on FacebookShare on Twitter

ದೇವದುರ್ಗ: ರಾಜ್ಯದಲ್ಲಿ ಕನಕಗುರುಪೀಠವು ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯತೀತ ಮನೋಭಾವಕ್ಕೆ ವಿಶೇಷ ಒತ್ತು ನೀಡಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇವದುರ್ಗದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ (ತಿಂಥಣಿ ಬ್ರಿಡ್ಜ್) ವತಿಯಿಂದ ಆಯೋಜಿಸಲಾಗಿದ್ದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “1992ರಲ್ಲಿ ಕುರುಬ ಸಮುದಾಯಕ್ಕಾಗಿ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠ ಸ್ಥಾಪನೆಯಾಗಿದ್ದು, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಗುರುಗಳಾಗಿದ್ದರು” ಎಂದು ಸ್ಮರಿಸಿದರು.

“ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಹಾಗೂ ಮುಂಬಯಿ ಕರ್ನಾಟಕ ವಿಭಾಗಗಳಾಗಿ ಗುರುಪೀಠ ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ವಿಭಾಗಗಳಿಗೆ ಪ್ರತ್ಯೇಕ ಗುರುಗಳಿದ್ದಾರೆ. ಆ ಪೈಕಿ ಈ ವಿಭಾಗದ ಗುರುಗಳಾಗಿ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಸಮಾಜ ಸುಧಾರಣೆಯ ಕಾರ್ಯಕ್ಕೆ ತಮ್ಮ ಜೀವನವನ್ನು ಅರ್ಪಿಸಿದ್ದರು” ಎಂದು ಹೇಳಿದರು.

“ಕಾಗಿನೆಲೆ ಗುರುಪೀಠದ ಸ್ಥಾಪನೆಯ ಮೂಲ ಉದ್ದೇಶವೇ ಸಮಸಮಾಜ ನಿರ್ಮಾಣವಾಗಿದೆ. ಕನಕದಾಸರ ‘ಕುಲಕುಲವೆಂದು ಹೊಡೆದಾಡದಿರಿ’ ಎಂಬ ಸಂದೇಶದಂತೆ, ಬುದ್ಧ, ಬಸವಾದಿ ಶರಣರು ಜಾತಿ ವ್ಯವಸ್ಥೆಗೆ ವಿರೋಧವಾಗಿ ಹೋರಾಡಿದ್ದಾರೆ. ವಿವಿಧ ಜಾತಿ, ಧರ್ಮ, ಭಾಷೆಗಳಿಂದ ಕೂಡಿರುವ ನಮ್ಮ ಸಮಾಜದಲ್ಲಿ ಮನುಜರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕಿದೆ” ಎಂದು ಸಿಎಂ ತಿಳಿಸಿದರು.

“ಶಿಕ್ಷಣ ದೊರೆತರೂ ಕೆಲವರು ಇನ್ನೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ. ಸ್ವಾಭಿಮಾನಿಗಳಾಗಿ ಬದುಕುವುದು ಅತ್ಯಂತ ಮುಖ್ಯ. ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆದ ಯುವಪೀಳಿಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಸಮಯದಲ್ಲಿ ಶೇ.15ರಷ್ಟಿದ್ದ ಶಿಕ್ಷಣ ಇಂದು ಶೇ.76ಕ್ಕೆ ಏರಿದರೂ ಜಾತಿವ್ಯವಸ್ಥೆ ಇನ್ನೂ ನಾಶವಾಗಿಲ್ಲ ಎಂಬುದು ವಿಷಾದಕರ ಸಂಗತಿ” ಎಂದು ಹೇಳಿದರು.

“ಸಮಾಜದ ಜಡತ್ವ ನಿವಾರಣೆಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಅಗತ್ಯ. ಸಮಾಜದಲ್ಲಿನ ಮೌಢ್ಯಗಳನ್ನು ಅಳಿಸುವ ಕಾರ್ಯದಲ್ಲಿ ಸ್ವಾಮೀಜಿಯವರು ಸದಾ ತೊಡಗಿಸಿಕೊಂಡಿದ್ದರು ಎಂದು ಸಿಎಂ ನುಡಿನಮನ ಸಲ್ಲಿಸಿದರು. ಜನರ ಆಶೀರ್ವಾದದಿಂದ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಮೊದಲ ಕರ್ತವ್ಯ” ಎಂದು ಸಿದ್ದರಾಮಯ್ಯ ಹೇಳಿದರು.

“ರಾಜ್ಯಾದ್ಯಂತ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಹಲವು ಬೇಡಿಕೆಗಳಿಗೆ ಅನುದಾನ ನೀಡಲಾಗುವುದು. ಎಲ್ಲಾ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಭೂಮಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

“ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಸಲ್ಲಿಸಿದೆ. ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ನಂತರ ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

Tags: ಎಸ್‌ಟಿಕನಕಗುರುಪೀಠಕಾಗಿನೆಲೆ ಮಹಾಸಂಸ್ಥಾನಕುರುಬಜಾತ್ಯತೀತ ಮನೋಭಾವದೇವದುರ್ಗಶ್ರೀ ಸಿದ್ದರಾಮಾನಂದಪುರಿ ಸ್ವಾಮಿಸಿದ್ದರಾಮಯ್ಯ
Previous Post

ಭಾಗ–2: Hot Chips ಅಂಗಡಿಗಳಿಗೆ FSSAI ಲೈಸೆನ್ಸ್ ಕಡ್ಡಾಯವೇ? ಕಾನೂನು ಏನು ಹೇಳುತ್ತದೆ? ಅಧಿಕಾರಿಗಳ ಹೊಣೆ ಏನು?

Next Post

ಮತದಾರರ ಪಟ್ಟಿಯ ಪರಿಶೀಲನೆ ಮತ್ತು ಬೂತ್ ಮಟ್ಟದ ಮೇಲ್ವಿಚಾರಣೆಯಲ್ಲಿ BLA-1 ಹಾಗೂ BLA-2 ಗಳ ಪಾತ್ರ

Next Post

ಮತದಾರರ ಪಟ್ಟಿಯ ಪರಿಶೀಲನೆ ಮತ್ತು ಬೂತ್ ಮಟ್ಟದ ಮೇಲ್ವಿಚಾರಣೆಯಲ್ಲಿ BLA-1 ಹಾಗೂ BLA-2 ಗಳ ಪಾತ್ರ

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS