• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ದೇಶ

ಉಮರ್ ಖಾಲಿದ್‌ಗೆ ಜಾಮೀನು ನೀಡುವಂತೆ ಭಾರತಕ್ಕೆ ಅಮೆರಿಕದ 8 ಸಂಸತ್ ಸದಸ್ಯರ ಒತ್ತಾಯ!

ತಪ್ಪು ಸಾಬೀತಾಗುವವರೆಗೆ ಪ್ರತಿಯೊಬ್ಬರೂ ನಿರಪರಾಧಿಗಳೆಂದು ಪರಿಗಣಿಸಬೇಕು. ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

by Dynamic Leader
02/01/2026
in ದೇಶ
0
0
SHARES
0
VIEWS
Share on FacebookShare on Twitter

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಅವರಿಗೆ ಜಾಮೀನು ನೀಡಬೇಕೆಂದು ಒತ್ತಾಯಿಸಿ ಅಮೆರಿಕದ 8 ಸಂಸತ್ ಸದಸ್ಯರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಪತ್ರ ಬರೆದಿದ್ದು, ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಉಮರ್ ಖಾಲಿದ್‌ಗೆ ನ್ಯಾಯಸಮ್ಮತ ಮತ್ತು ವೇಗವಾದ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತರ-ಪೂರ್ವ ದೆಹಲಿಯಲ್ಲಿ 2020ರಲ್ಲಿ ಸಂಭವಿಸಿದ ಗಲಭೆಗಳ ಹಿನ್ನೆಲೆಯಲ್ಲಿ ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ಶಡ್ಯಂತ್ರ, ಗಲಭೆ, ಅಕ್ರಮ ಜಮಾವಣೆ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಈ ಸಂದರ್ಭದಲ್ಲಿ ಡಿಸೆಂಬರ್ 30, 2025 ರಂದು ಬರೆದ ಪತ್ರದಲ್ಲಿ ಅಮೆರಿಕದ ಸಂಸತ್ ಸದಸ್ಯರು, ಉಮರ್ ಖಾಲಿದ್ ಅವರನ್ನು ಕಳೆದ ಐದು ವರ್ಷಗಳಿಂದ UAPA ಕಾಯ್ದೆಯಡಿ ಜಾಮೀನು ನೀಡದೆ ಬಂಧನದಲ್ಲೇ ಇರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದು ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬ ತತ್ವಕ್ಕೆ ವಿರುದ್ಧವಾಗಿರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಸಮ್ಮತ ಅವಧಿಯೊಳಗೆ ವಿಚಾರಣೆ ನಡೆಸುವ ಅಥವಾ ಬಿಡುಗಡೆ ಮಾಡುವ ವ್ಯಕ್ತಿಯ ಹಕ್ಕುಗಳನ್ನು ಭಾರತ ರಕ್ಷಿಸಬೇಕು. ತಪ್ಪು ಸಾಬೀತಾಗುವವರೆಗೆ ಪ್ರತಿಯೊಬ್ಬರೂ ನಿರಪರಾಧಿಗಳೆಂದು ಪರಿಗಣಿಸಬೇಕೆಂದು ಅವರು ಹೇಳಿದ್ದಾರೆ. ಉಮರ್ ಖಾಲಿದ್ ಹಾಗೂ ಅವರೊಂದಿಗೆ ಬಂಧಿತರಾಗಿರುವವರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಬೇಕು ಮತ್ತು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಪತ್ರವನ್ನು ಟಾಮ್ ಲಾಂಟೋಸ್ ಮಾನವ ಹಕ್ಕುಗಳ ಆಯೋಗದ ಸಹ-ಅಧ್ಯಕ್ಷರೂ ಆಗಿರುವ ಡೆಮೊಕ್ರಾಟಿಕ್ ಪಕ್ಷದ ಸಂಸದ ಜಿಮ್ ಮೆಕ್ಗವರ್ಣ್ ಹಂಚಿಕೊಂಡಿದ್ದಾರೆ. ಪತ್ರಕ್ಕೆ ಜೇಮಿ ರಾಸ್ಕಿನ್, ಭಾರತೀಯ ಮೂಲದ ಸಂಸದೆ ಪ್ರಮಿಳಾ ಜಯಪಾಲ್, ಜಾನ್ ಶಾಕೋವ್ಸ್ಕಿ, ಲಾಯ್ಡ್ ಡೊಗಟ್, ರಶೀದಾ ತ್ಲೈಬ್, ಕ್ರಿಸ್ ವಾನ್ ಹೋಲೆನ್ ಹಾಗೂ ಪೀಟರ್ ವೆಲ್ಚ್ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ.

ಇದೇ ಪತ್ರದಲ್ಲಿ, ಡಿಸೆಂಬರ್ ತಿಂಗಳ ಆರಂಭದಲ್ಲಿ ಉಮರ್ ಖಾಲಿದ್ ಅವರ ಪೋಷಕರನ್ನು ಭೇಟಿಯಾದ ವಿಷಯವನ್ನೂ ಅಮೆರಿಕದ ಸಂಸತ್ ಸದಸ್ಯರು ಉಲ್ಲೇಖಿಸಿದ್ದಾರೆ.

Tags: Umar Khalidಅಮೆರಿಕಉಮರ್ ಖಾಲಿದ್‌ಜಾಮೀನುದೆಹಲಿ ಗಲಭೆ ಪ್ರಕರಣಸಂಸತ್ ಸದಸ್ಯರು
Previous Post

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಡವರಲ್ಲಿ ಕ್ಷಮೆ ಕೇಳಬೇಕು; ಸಂಘ ಪರಿವಾರವನ್ನು ಮೆಚ್ಚಿಸಲು ಬಾಂಗ್ಲಾ ಜಪ: ವೆಲ್ಫೇರ್ ಪಾರ್ಟಿ

Next Post

ಬುದ್ಧನ ಪವಿತ್ರ ವಸ್ತುಗಳ ಪ್ರದರ್ಶನ; ನಾಳೆ ದೆಹಲಿಯಲ್ಲಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

Next Post

ಬುದ್ಧನ ಪವಿತ್ರ ವಸ್ತುಗಳ ಪ್ರದರ್ಶನ; ನಾಳೆ ದೆಹಲಿಯಲ್ಲಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಇಸ್ಲಾಂ ಮತ್ತು ಪೆರಿಯಾರ್

18/09/2026

‘PayTM’ ಅಂದ್ರೆ ‘Pay To Modi’ ಎಂದಿದ್ದ ರಾಹುಲ್ ಗಾಂಧಿ; 10 ವರ್ಷಗಳ ಬಳಿಕ ಮತ್ತೆ ಚರ್ಚೆಗೆ!

17/09/2026

2029ರ ಲೋಕಸಭಾ ಚುನಾವಣೆಗೆ ಮುನ್ನ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ

14/09/2026

ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಕಮ್ಯುನಿಸ್ಟ್ ಪಕ್ಷಗಳು ಉಪ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ!

13/09/2026

Recent News

ಇಸ್ಲಾಂ ಮತ್ತು ಪೆರಿಯಾರ್

18/09/2026

‘PayTM’ ಅಂದ್ರೆ ‘Pay To Modi’ ಎಂದಿದ್ದ ರಾಹುಲ್ ಗಾಂಧಿ; 10 ವರ್ಷಗಳ ಬಳಿಕ ಮತ್ತೆ ಚರ್ಚೆಗೆ!

17/09/2026

2029ರ ಲೋಕಸಭಾ ಚುನಾವಣೆಗೆ ಮುನ್ನ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ

14/09/2026

ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಕಮ್ಯುನಿಸ್ಟ್ ಪಕ್ಷಗಳು ಉಪ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ!

13/09/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಇಸ್ಲಾಂ ಮತ್ತು ಪೆರಿಯಾರ್

18/09/2026

‘PayTM’ ಅಂದ್ರೆ ‘Pay To Modi’ ಎಂದಿದ್ದ ರಾಹುಲ್ ಗಾಂಧಿ; 10 ವರ್ಷಗಳ ಬಳಿಕ ಮತ್ತೆ ಚರ್ಚೆಗೆ!

17/09/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS