• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜಕೀಯ

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಡವರಲ್ಲಿ ಕ್ಷಮೆ ಕೇಳಬೇಕು; ಸಂಘ ಪರಿವಾರವನ್ನು ಮೆಚ್ಚಿಸಲು ಬಾಂಗ್ಲಾ ಜಪ: ವೆಲ್ಫೇರ್ ಪಾರ್ಟಿ

ಮುಂದಿನ ಪಶ್ಚಿಮ ಬಂಗಾಳ‌ ಚುನಾವಣೆ ಗೆಲ್ಲಲು ಬಿಜೆಪಿ‌ಯೇತರ ರಾಜ್ಯಗಳಲ್ಲಿ ಬಾಂಗ್ಲಾದೇಶದ ನಿವಾಸಿಗಳು ನೆಲೆಸಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ.

by Dynamic Leader
01/01/2026
in ರಾಜಕೀಯ
0
0
SHARES
0
VIEWS
Share on FacebookShare on Twitter

ಬೆಂಗಳೂರು: ‘ಯಲಹಂಕದ ಕೋಗಿಲು ಬಡಾವಣೆಯ ಫಕೀರ ಕಾಲೋನಿಗೆ ಭೇಟಿ ಕೊಟ್ಟಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ತಮ್ಮ ಕೊಳಕು ರಾಜಕೀಯ ಉದ್ದೇಶಗಳಿಗಾಗಿ ಬಡ ಮಹಿಳೆಯನ್ನು ಬೆದರಿಸಿ ಅವಮಾನಿಸಿದ್ದು, ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

ಬಡವರ ದುಃಖ-ದುರಂತದಲ್ಲಿಯೂ ಕೋಮುವಾದದ ಬೀಜ ಬಿತ್ತುವ ಅವರ ಈ ಹೀನ ಮತ್ತು ಅಮಾನವೀಯ ವರ್ತನೆ ಅತ್ಯಂತ ಖಂಡನೀಯ ಎಂದು ಕಿಡಿಕಾರಿದ್ದಾರೆ.

ಸೂರು ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ಹೇಳಬೇಕಾದ ವಿರೋಧ ಪಕ್ಷದ ನಾಯರೊಬ್ಬರಿಂದ ಸಂತ್ರಸ್ತರಿಗೆ ಅವಮಾನಗೊಳಿಸಿ, ಅವರನ್ನು ಹೊರ ದೇಶದವರು ಎಂದು ಹೀಯಾಳಿಸುವುದು ನಮ್ಮ ರಾಜ್ಯದ ದೊಡ್ಡ ದುರಂತ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಆರ್.ಅಶೋಕ್ ಅವರು ಸಂಘ ಪರಿವಾರದ ನಾಯಕರನ್ನು ಮೆಚ್ಚಿಸಲು‌ ಭೇಟಿ ಕೊಟ್ಟಿದ್ದೂ ಅಲ್ಲದೆ, ಮುಸ್ಲಿಂ ಮಹಿಳೆಯೊಬ್ಬರು ಅರೆಬರೆ ಕನ್ನಡ ಮಾತಾಡಿದ್ದನ್ನು ನೆಪವಾಗಿಸಿಕೊಂಡು, ಅವರ ನಾಗರಿಕತೆಯನ್ನು ಪ್ರಶ್ನಿಸುವುದನ್ನು ನೋಡಿದರೆ, ಅವರ ಮುಸ್ಲಿಂ ವಿರೋಧಿ‌ ಧೋರಣೆ ಎಷ್ಟರಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ. ಇಷ್ಟು ದಿನ ಪಾಕಿಸ್ತಾನದ ಜಪ ಮಾಡುತ್ತಿದ್ದ ಬಿಜೆಪಿ ಸಂಘ ಪರಿವಾರದ ನಾಯಕರು ಈಗ ಬಾಂಗ್ಲಾದೇಶದ ಜಪ ಮಾಡುತ್ತಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ. ಮುಂದಿನ ಪಶ್ಚಿಮ ಬಂಗಾಳ‌ ಚುನಾವಣೆ ಗೆಲ್ಲಲು ಬಿಜೆಪಿ‌ಯೇತರ ರಾಜ್ಯಗಳಲ್ಲಿ ಬಾಂಗ್ಲಾದೇಶದ ನಿವಾಸಿಗಳು ನೆಲೆಸಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೋಗಿಲು ಲೇಔಟ್ ಬಗ್ಗೆ ಕೇರಳ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದನ್ನು ನೆಪವಾಗಿಟ್ಟುಕೊಂಡ ಆರ್.ಅಶೋಕ್, ‘ಕೋಗಿಲು ಕ್ರಾಸ್‌ನ ಫಕೀರ್‌ ಬಡಾವಣೆ ಕ್ರಮೇಣ ಸ್ಲೀಪರ್‌ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಬಾಂಗ್ಲಾದವರಿಂದಾಗಿ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಮುಂದೆ ಕರ್ನಾಟಕವೂ ಹೀಗೆಯೇ ಆಗಲಿದೆ. ಆದ್ದರಿಂದ, ಮೊದಲು ಇಲ್ಲಿನವರ ಪೌರತ್ವ ಪರಿಶೀಲಿಸುವ ಕಾರ್ಯ ಆಗಬೇಕು’ ಎಂದು‌ ಹೇಳಿದ್ದಾರೆ. ಇದು ಖಂಡನೀಯ.

ಅಕ್ರಮ ಬಾಂಗ್ಲಾ ನಿವಾಸಿಗಳು ಭಾರತಕ್ಕೆ ಬರಬೇಕಾದರೆ ದೇಶದಲ್ಲಿನ ಗೃಹ ಸಚಿವರು ವೈಫಲ್ಯ ಕಾರಣವಲ್ಲವೇ? ಹಾಗಾದರೆ, ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.

Tags: Fakir ColonyKogiluಅಮಿತ್ ಶಾಆರ್.ಅಶೋಕ್ಕೋಗಿಲುಪಶ್ಚಿಮ ಬಂಗಾಳ ಚುನಾವಣೆಫಕೀರ ಕಾಲೋನಿಬಾಂಗ್ಲಾದೇಶಬಿಜೆಪಿರಾಜೀನಾಮೆವೆಲ್‌ಫೇರ್ ಪಾರ್ಟಿಸಂಘ ಪರಿವಾರ
Previous Post

2025ರಲ್ಲಿ ಏಷ್ಯಾದಲ್ಲೇ ಅತಿಹೆಚ್ಚು ಕುಸಿದ ಭಾರತೀಯ ರೂಪಾಯಿ; 2026ರಲ್ಲಿ ಚೇತರಿಕೆಯಾಗುತ್ತದೆಯೇ? – RBI ವರದಿ

Next Post

ಉಮರ್ ಖಾಲಿದ್‌ಗೆ ಜಾಮೀನು ನೀಡುವಂತೆ ಭಾರತಕ್ಕೆ ಅಮೆರಿಕದ 8 ಸಂಸತ್ ಸದಸ್ಯರ ಒತ್ತಾಯ!

Next Post

ಉಮರ್ ಖಾಲಿದ್‌ಗೆ ಜಾಮೀನು ನೀಡುವಂತೆ ಭಾರತಕ್ಕೆ ಅಮೆರಿಕದ 8 ಸಂಸತ್ ಸದಸ್ಯರ ಒತ್ತಾಯ!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS