ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ, ಇತ್ತೀಚೆಗೆ ನೂತನವಾಗಿ ರೂಪುಗೊಂಡ ಹೊರಮಾವು ವಾರ್ಡಿನಲ್ಲಿ ಗಣನೀಯ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ವಾಸಿಸುತ್ತಿದ್ದಾರೆ. ಅವರಲ್ಲಿ ಕ್ರೈಸ್ತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಕ್ಯಾಥೋಲಿಕ್ ಚರ್ಚ್, ಸಿಎಸ್‌ಐ ಚರ್ಚ್, ಮೆಥೋಡಿಸ್ಟ್ ಚರ್ಚ್, ಪೆಂಟೆಕೋಸ್ಟಲ್ ಚರ್ಚ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಿಷನರಿ ಚರ್ಚುಗಳು ಕಾರ್ಯನಿರ್ವಹಿಸುತ್ತಿವೆ.
ಈ ಪ್ರದೇಶದ ಕ್ರೈಸ್ತ ಸಮುದಾಯದ ನಂಬಿಕೆಯ ವ್ಯಕ್ತಿಯಾಗಿ ಹಾಗೂ ರಕ್ಷಕರಾಗಿ ಸಮಾಜಸೇವಕ ಅಗರ ಪ್ರಕಾಶ್ ಗುರುತಿಸಿಕೊಂಡಿದ್ದಾರೆ. ಕ್ರೈಸ್ತರ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮವಾಗಿದ್ದರೂ ತಪ್ಪದೇ ಭಾಗವಹಿಸುತ್ತಾರೆ. ಕ್ರೈಸ್ತರಿಗೆ ಸಮಸ್ಯೆಗಳಾದರೆ ಮೊದಲಾಗಿ ಸ್ಥಳಕ್ಕಾಗಮಿಸಿ ನಿಂತು ಪರಿಹಾರಕ್ಕೆ ಮುಂದಾಗುತ್ತಾರೆ. ತಮ್ಮಿಂದ ಸಾಧ್ಯವಾದ ಎಲ್ಲ ರೀತಿಯ ಸಹಾಯವನ್ನು ನೀಡುತ್ತಾ ಬಂದಿರುವುದರಿಂದಲೇ ಅವರನ್ನು ‘ಕ್ರೈಸ್ತ ಸಮುದಾಯದ ರಕ್ಷಕ’ ಎಂದು ಕರೆಯಲಾಗುತ್ತಿದೆ.

ಕಳೆದ ಅಕ್ಟೋಬರ್ 12ರಂದು ಕೊತ್ತನೂರು CSI ಚರ್ಚ್ ನಲ್ಲಿ ವಾರ್ಷಿಕ ಥ್ಯಾಂಕ್ಸ್‌ಗಿವಿಂಗ್ ಸರ್ವೀಸ್ 2025 ಮತ್ತು ಸುಗ್ಗಿಯ ಉತ್ಸವವನ್ನು (Harvest Festival) ಆಚರಿಸಲಾಯಿತು. ಇದು “ದೇವರ ಔದಾರ್ಯ ಆಶೀರ್ವಾದಗಳಿಗೆ ಕೃತಜ್ಞತೆ” ಎಂಬ ವಿಷಯದ ಮೇಲೆ ಕೇಂದ್ರೀಕೃತವಾದ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಅಗರ ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ರೈಸ್ತ ಮುಖಂಡ ಎಂ.ಎಸ್.ಗುರುದಾಸ್ ಮುಂದಾಳತ್ವ ವಹಿಸಿದ್ದರು. ಡಿಸೆಂಬರ್ 15 ರಂದು ಕೊತ್ತನೂರು ಸಿಎಸ್ಐ ಚರ್ಚ್ ವತಿಯಿಂದ ಅಗರ ಪ್ರಕಾಶ್ ಅವರ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಯೇಸುವಿನ ಜನನ ಮತ್ತು ಆತನ ಮಹಿಮೆಯನ್ನು ಕೊಂಡಾಡುವ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಕ್ಯಾರೋಲ್ ನಡೆಸಲಾಯಿತು.

ಮೇಲಿನಂತೆಯೇ ಡಿಸಂಬರ್ 21 ರಂದು ಕೊತ್ತನೂರು CSI ಚರ್ಚ್ ನಲ್ಲಿ ಅಂತರ – ಧಾರ್ಮಿಕ ಕ್ರಿಸ್ಮಸ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕಾಗಿನೆಲೆ ಕನಕ ಗುರುಪೀಠ ತಿಂಥಿಣಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ, ಮೌಲಾನ ಮುನವರ್ ಹುಸೇನ್ ಸಾಹೇಬ್ ರಶ್ದಿ, ಸಿಸ್ಟರ್ ಕೇಸರಿ ಫೆರ್ನಾಂಡಿಸ್, ಸಿಎಸ್‌ಐ ಚರ್ಚಿನ ಪ್ರೆಸ್ ಬೈಟರ್-ಇನ್-ಚಾರ್ಜ್ ರೆವರಂಡ್ ನವೀನ್ ಕೆ. ಜಾನ್ ಮುಂತಾದವರು ಭಾಗವಹಿಸಿ ಅಂತರ-ಧಾರ್ಮಿಕ ವಿಚಾರಗಳ ಬಗ್ಗೆ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಶ್ರೀ ನಾರಾಯಣಸ್ವಾಮಿ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಕೆ. ಮೋಹನ್ ಬಾಬು, ಹಿರಿಯ ಕಾಂಗ್ರೆಸ್ ಮುಖಂಡರಾದ ಅಗರ್ ಸುರೇಶ್, ಪುರುಷೋತ್ತಮ್, ಕ್ರೈಸ್ತ ಮುಖಂಡ ಎಂ.ಎಸ್.ಗುರುದಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅದೇ ರೀತಿ, ಕಳೆದ 23 ರಂದು ಜೋಸೆಫ್ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ ಅಗರ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕ್ರೈಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರಿಗೂ ಕ್ರಿಸ್ಮಸ್ ಕೇಕ್ ವಿತರಿಸಲಾಗಿದ್ದು, 2026ನೇ ಸಾಲಿನ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರೆವರೆಂಡ್ ಡಾ.ಅಬ್ರಹಾಂ ಥಾಮಸ್, ಮಾಜಿ ಸಂಸದ ಪ್ರೊಫೆಸರ್ ಎಂ.ವಿ.ರಾಜೀವ್ ಗೌಡ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಮೋಹನ್ ಬಾಬು, ಹೊರಮಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ವೆಂಕಟೇಶ್, ಕ್ರೈಸ್ತ ಮುಖಂಡ ಎಂ.ಎಸ್.ಗುರುದಾಸ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರುಗಳು, ವಾರ್ಡ್ ಅಧ್ಯಕ್ಷರುಗಳು, ಬ್ಲಾಕ್ ಮತ್ತು ವಾರ್ಡ್ ಮಟ್ಟದ ಇತರೆ ವಿಭಾಗದ ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದ್ದರು.

ಕ್ಯಾಲೆಂಡರ್ ಬಿಡುಗಡೆ ಸಮಾರಂಭಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಆಗಮಿಸಬೇಕಾಗಿತ್ತು. ಆದರೆ ಕಾರ್ಯನಿಮಿತ್ತ ಅವರು ಆ ದಿನ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಮರುದಿನ ಅಗರ ಪ್ರಕಾಶ್ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭಾಶಯ ಕೋರಿದರು.

ಈ ಮಧ್ಯೆ ಇವಾಂಜೆಲಿಸ್ಟಿಕ್ ಕಂಪ್ಯಾನಿಯನ್ಸ್ ಆಫ್ ಇಂಡಿಯಾ ಟ್ರಸ್ಟ್ ವತಿಯಿಂದ ರೆವರೆಂಡ್ ಡಾ.ಡಬ್ಲ್ಯೂ.ಥಾಂಪ್ಸನ್ ಸ್ಮಿತ್ ರವರು ನಡೆಸಿದ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಶ್ವಿಯಾಗಿ ನಡೆಸಿಕೊಟ್ಟರು.

ಅಗರ ಪ್ರಕಾಶ್ ಅವರ ಈ ರೀತಿಯ ಜನಪರ ಸೇವೆಯನ್ನು ಮೆಚ್ಚಿ, ಇತ್ತೀಚೆಗೆ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ವತಿಯಿಂದ 2025ನೇ ಸಾಲಿನ “ಸಾರ್ಥಕ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ ಜನಸೇವೆಗಾಗಿ ಅವರು ಈ ರೀತಿಯ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ತಮ್ಮ ವಿನಯ, ಸರಳತೆ ಹಾಗೂ ಸೇವಾ ಮನೋಭಾವದಿಂದಾಗಿ ಅವರು ಅದನ್ನು ಬಹಿರಂಗಪಡಿಸಿಕೊಳ್ಳುವುದಿಲ್ಲ. ಸಂಯಮ, ಸರಳತೆ ಮತ್ತು ಸೇವಾ ಮನೋಭಾವದಿಂದಾಗಿ ಅವರು ಅದನ್ನು ಬಹಿರಂಗಪಡಿಸುವುದಿಲ್ಲ. ಈ ಆತ್ಮ ಸಂಯಮವೇ ಅವರನ್ನು ಈ ಮಟ್ಟಕ್ಕೆ ಏರಿಸಿದೆ.

ಕ್ರೈಸ್ತ ಸಮುದಾಯದ ಅಪಾರ ಬೆಂಬಲವನ್ನು ಪಡೆದಿರುವ ಅಗರ ಪ್ರಕಾಶ್ ಅವರು ಅಹಿಂದ ವರ್ಗದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ನಾಯಕರೂ ಆಗಿದ್ದಾರೆ. ಜಾತಿ–ಮತ ಭೇದವಿಲ್ಲದೆ, ಬಡ–ಶ್ರೀಮಂತ ಎಂಬ ವ್ಯತ್ಯಾಸವಿಲ್ಲದೆ ಸಹಾಯಕ್ಕಾಗಿ ಬಂದ ಪ್ರತಿಯೊಬ್ಬರಿಗೂ ತಮ್ಮಿಂದಾದ ನೆರವನ್ನು ನೀಡುವುದು ಅವರ ಜೀವನ ಧ್ಯೇಯವಾಗಿದೆ.
ಹೊರಮಾವು ವಾರ್ಡಿನಲ್ಲಿ ಅವರು ಮಾಡುತ್ತಿರುವ ಜನಸೇವೆಯನ್ನು ಹಾಗೂ ಅವರ ಮಾನವೀಯ ಗುಣವನ್ನು ಮೆಚ್ಚದವರೇ ಇಲ್ಲ. ಅವರ ಸೇವೆ ಮುಂಬರುವ ದಿನಗಳಲ್ಲಿಯೂ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಎಂಬುದೇ ನಮ್ಮೆಲ್ಲರ ಆಶಯ.














