ಪಶ್ಚಿಮ ಬಂಗಾಳದ ಹಿಂಗಲ್‌ಗಂಜ್ (Hingalganj) ವಿಧಾನಸಭಾ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕಿ ರೇಖಾ ಪಾತ್ರ (Rekha Patra), ದನಗಳನ್ನು ಸಾಗಿಸುತ್ತಿದ್ದ ಭಾರೀ ವಾಹನದ ಮಾರ್ಗವನ್ನು ತಡೆದು, ಲಾರಿ ಚಾಲಕನಿಗೆ, “14 ವರ್ಷಕ್ಕೆ ಒಳಪಟ್ಟ ಪಶುಗಳನ್ನು ಮಾಂಸಕ್ಕಾಗಿ ಕತ್ತರಿಸಬಾರದು ಎಂದು ಮುಖ್ಯಮಂತ್ರಿ ಸುವೆಂದು ಅಧಿಕಾರಿ ಅದೇಶಿಸಿದ್ದಾರೆ. ಹಾಗಾಗಿ ನೀವು ನಮಗೆ ಹಸುಗಳ ಜನನ ಪ್ರಮಾಣಪತ್ರವನ್ನು ತೋರಿಸಬೇಕು. ಇಲ್ಲದಿದ್ದರೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಬೆದರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಕುನಾಲ್ ಘೋಷ್, “ಡಬಲ್ ಇಂಜಿನ್ ಸರ್ಕಾರ (ಬಿಜೆಪಿ ಆಡಳಿತವಿರುವ ರಾಜ್ಯ) ಜಾರಿಯಲ್ಲಿರುವ ಯಾವುದೇ ರಾಜ್ಯದಲ್ಲಿ ಹಸುವಿಗೆ ನೀಡಲಾದ ಜನನ ಪ್ರಮಾಣ ಪತ್ರವನ್ನು ತರುವಂತೆ ನಾವು ಗೌರವಾನ್ವಿತ ಶಾಸಕರನ್ನು ವಿನಂತಿಸುತ್ತೇವೆ.
ಅದು ಪುರಾವೆಗಳಿಗೆ ಸಹಾಯವಾಗಿರುತ್ತದೆ. ಬಿಜೆಪಿಯವರು ಹಸುವಿನ ಅಂತಹ ಜನನ ಪ್ರಮಾಣಪತ್ರವನ್ನು ತೋರಿಸಲು ಸಾಧ್ಯವಾದರೆ, ಆ ಪ್ರಮಾಣಪತ್ರಗಳನ್ನು ಯಾರು ಅಧಿಕೃತಗೊಳಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಹಸುಗಳ ಜನನ ಪ್ರಮಾಣಪತ್ರ ಕೇಳಿದ ಬಿಜೆಪಿ ಶಾಸಕಿ ಎಸಿ ಸಿ ಮೀಸಲು ಕ್ಷೇತ್ರದಿಂದ ಗೆದ್ದು ಬಂದ ದಲಿತ ಮಹಿಳೆ ಎಂಬುದು ಗಮನಾರ್ಹ.















