2026ರ ಜಾಗತಿಕ ಅಸಮಾನತೆ ವರದಿಯನ್ನು ಬಿಡುಗಡೆ ಮಾಡಲಾಗಿದೆ. 2018 ಮತ್ತು 2022ರ ನಂತರ ಇದು ಮೂರನೇ ವರದಿಯಾಗಿದೆ.
ವರದಿಯಲ್ಲಿ
ಭಾರತದ ಶೇ.1 ರಷ್ಟು ಶ್ರೀಮಂತರು ದೇಶದ ಶೇ.40.1 ರಷ್ಟು ಸಂಪತ್ತನ್ನು ಹೊಂದಿದ್ದಾರೆ.
ಭಾರತದ ಶೇ.10 ರಷ್ಟು ಶ್ರೀಮಂತರು ದೇಶದ ಶೇ.65 ರಷ್ಟು ಸಂಪತ್ತನ್ನು ಹೊಂದಿದ್ದಾರೆ.
ಭಾರತದಲ್ಲಿರುವ ಶೇ.40 ರಷ್ಟು ಮಧ್ಯಮ ವರ್ಗದವರು, ಉಳಿದ ಶೇ.50 ರಷ್ಟು ಜನರು ಕ್ರಮವಾಗಿ ಶೇ.28.6 ರಷ್ಟು ಆಸ್ತಿ ಮತ್ತು ಶೇ.6.4 ರಷ್ಟು ಆಸ್ತಿಯನ್ನು ಹೊಂದಿದ್ದಾರೆ.
ಕೆಳಮಟ್ಟದ ಶೇ.50 ರಷ್ಟು ಜನರು ಭಾರತದ ಒಟ್ಟು ಆದಾಯದಲ್ಲಿ ಕೇವಲ ಶೇ.15 ರಷ್ಟು ಮಾತ್ರವೇ ಪಡೆಯುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಆದಾಯ ಅಸಮಾನತೆಯಲ್ಲಿ ದೊಡ್ಡ ಬದಲಾವಣೆಯೇನೂ ಆಗಿಲ್ಲ.
ಜಾಗತಿಕವಾಗಿ ನೋಡಿದಾಗ
ಶೇ.10 ರಷ್ಟು ಶ್ರೀಮಂತರು ಶೇ.75 ರಷ್ಟು ಆಸ್ತಿಯನ್ನು ಹೊಂದಿದ್ದಾರೆ.
ನಂತರ, ಶೇ.40 ರಷ್ಟು ಇರುವ ಮಧ್ಯಮ ವರ್ಗದವರು ಮತ್ತು ಉಳಿದ ಶೇ.50 ರಷ್ಟು ಜನರು ಕ್ರಮವಾಗಿ ಶೇ.23 ರಷ್ಟು ಸಂಪತ್ತು ಮತ್ತು ಶೇ.2 ರಷ್ಟು ಸಂಪತ್ತನ್ನು ಹೊಂದಿದ್ದಾರೆ.
ವಿಶ್ವದ ಟಾಪ್ 5 ಆರ್ಥಿಕ ದೇಶಗಳ ಸರಾಸರಿ ವ್ಯಕ್ತಿಯ ಆದಾಯದ ಮಟ್ಟವನ್ನು ಸಹ ಪ್ರಕಟಿಸಲಾಗಿದೆ.
1. ಅಮೆರಿಕ – 69,603 ಡಾಲರ್
2. ಚೀನಾ – 2,552 ಡಾಲರ್
3. ಜರ್ಮನಿ – 59,423 ಡಾಲರ್
4. ಭಾರತ – 9,095 ಡಾಲರ್
5. ಜಪಾನ್ – 45,082 ಡಾಲರ್














