• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ಕ್ರೀಡೆ

ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು; ಆ ಕಾಲದಲ್ಲಿಯೂ ಜಾತಿ ವ್ಯವಸ್ಥೆಯಿತ್ತು: ಸಿದ್ದರಾಮಯ್ಯ

2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದೆ.

by Dynamic Leader
01/12/2025
in ಕ್ರೀಡೆ
0
0
SHARES
104
VIEWS
Share on FacebookShare on Twitter

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 2022 ಮತ್ತು 2023ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಹಾಗೂ 2023ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

“ಉತ್ತಮ ತರಬೇತಿ, ತರಬೇತುದಾರರು ಹಾಗೂ  ಸೌಲಭ್ಯಗಳಿದ್ದರೆ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಷ್ಟವೇನಲ್ಲ. ಕ್ರೀಡಾಪಟುಗಳು ತಮ್ಮ ಗುರಿಸಾಧನೆಗೆ ಹಗಲಿರುಳು ಶ್ರಮಿಸಬೇಕು. ಏಳು ಕೋಟಿ ಕನ್ನಡಿಗರಿರುವ ಕರ್ನಾಟಕದಿಂದ ಪದಕ ಗೆಲ್ಲುವುದು ಅಸಾಧ್ಯವೇನಲ್ಲ” ಎಂದು ಹೇಳಿದರು.

“ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಲಂಪಿಕ್ಸ್ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ, ಶ್ರೇಣಿ 1 ಅಥವಾ 2ರಲ್ಲಿ ಸರ್ಕಾರಿ ಉದ್ಯೋಗ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ., ಕಂಚು ಪದಕ ವಿಜೇತರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ” ಎಂದು ಹೇಳಿದರು.

“ಎರಡು ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಒಟ್ಟು 30 ಜನರಿಗೆ ನೀಡಲಾಗಿದ್ದು, 4 ಲಕ್ಷಗಳ ನಗದು ಬಹುಮಾನವನ್ನು ಪ್ರಶಸ್ತಿ ಒಳಗೊಂಡಿದೆ. ನಗದು ಬಹುಮಾನದ ಮೊತ್ತವನ್ನು ನನ್ನ ಅವಧಿಯಲ್ಲಿಯೇ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷದ  ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ನೀಡುವ ತರಬೇತುದಾರರಿಗೆ ಒಟ್ಟು 9 ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ” ಎಂದರು.

“ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕರನ್ನು ಗುರುತಿಸಿ ಒಟ್ಟು 15 ಕ್ರೀಡಾರತ್ನ ಪ್ರಶಸ್ತಿಗಳನ್ನು ನೀಡಲಾಗಿದ್ದು, ರೂ.2 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಖಾಸಗಿ ಕ್ಷೇತ್ರದ ಸಂಸ್ಥಗಳನ್ನು ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗಿದೆ” ಎಂದು ಹೇಳಿದರು.

“ಕರ್ನಾಟಕದ ಕ್ರೀಡಾಪಟುಗಳಿಗೆ ಗೆಲ್ಲುವ ಸಾಧ್ಯತೆಗಳಿವೆ, ಪ್ರಯತ್ನ ಮಾಡಬೇಕಷ್ಟೆ. 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದ್ದು, ಪ್ರತಿ ವರ್ಷ 10 ಲಕ್ಷ ರೂ.ಗಳನ್ನು ತರಬೇತಿಯ ಅವಧಿಯಲ್ಲಿಯೇ ನೀಡಲಾಗುತ್ತದೆ” ಎಂದು ಹೇಳಿದರು.

“ಕ್ರೀಡಾಪಟುಗಳು ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿಯೇ ಸಂಪೂರ್ಣ ಏಕಾಗ್ರತೆ, ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು” ಎಂಬ ಕಿವಿಮಾತು ಹೇಳಿದರು.

“ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ. ಒಲಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಕರ್ನಾಟಕ ಉತ್ತಮ ಕ್ರೀಡಾಪಟುಗಳನ್ನು ಈವರೆಗೆ ರೂಪಿಸಿದೆ. ಹಾಕಿಯಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅಥ್ಲೆಟಿಕ್ಸ್ ನಲ್ಲಿಯೂ ಸಾಧನೆ ಮಾಡಬೇಕು” ಎಂದು ಹೇಳಿದರು.

“ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು. ಅರ್ಜುನನಿಗಿಂತ ಮೀರಿ ಬಿಲ್ಲುವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಪಡೆಯುತ್ತಾರೆ. ಆ ಕಾಲದಲ್ಲಿಯೂ ಜಾತಿ ವ್ಯವಸ್ಥೆಯಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಏಕಲವ್ಯ ಪ್ರಶಸ್ತಿ ಪಡೆದವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸುತ್ತೇನೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ” ಎಂದು ಶುಭ ಹಾರೈಸಿದರು.

Tags: Sports DepartmentYouth Empowermentಅಥ್ಲೆಟಿಕ್ಸ್ಏಕಲವ್ಯಒಲಂಪಿಕ್ಸ್ಕರ್ನಾಟಕ ಕ್ರೀಡಾ ಪೋಷಕಕರ್ನಾಟಕ ಕ್ರೀಡಾರತ್ನಕಾಮನ್ ವೆಲ್ತ್ಕ್ರೀಡಾ ಇಲಾಖೆಕ್ರೀಡಾಪಟುಜೀವಮಾನ ಸಾಧನೆದ್ರೋಣಾಚಾರ್ಯರುಪ್ರಶಸ್ತಿ ಪ್ರದಾನಬೇಡರುಯುವ ಸಬಲೀಕರಣಸಿದ್ದರಾಮಯ್ಯ
Previous Post

ಇಂದಿರಾ ಆಹಾರ ಕಿಟ್ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿ ಸೂಚನೆ ನೀಡಿದ ಸಿದ್ದರಾಮಯ್ಯ

Next Post

ಮುಂದಿನ 20 ವರ್ಷಗಳಲ್ಲಿ ಕೆಲಸ ಐಚ್ಛಿಕವಾಗಲಿದೆ: ಎಲಾನ್ ಮಸ್ಕ್!

Next Post

ಮುಂದಿನ 20 ವರ್ಷಗಳಲ್ಲಿ ಕೆಲಸ ಐಚ್ಛಿಕವಾಗಲಿದೆ: ಎಲಾನ್ ಮಸ್ಕ್!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS