• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜ್ಯ

ಸಿ.ಟಿ.ರವಿ ರಂಪಾಟಕ್ಕೆ ಕೊನೆ ಇಲ್ಲವೆ.. ಕೋಮು ದ್ವೇಷದ ರಾಜಕಾರಣ ಮತ್ತು ಕಾನೂನಿನ ಮೌನಗಳು

ಸತ್ಯ, ನ್ಯಾಯ, ನೈತಿಕತೆ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯುವ ರಾಜಕೀಯವೇ ದೇಶವನ್ನು ಬಲಪಡಿಸುತ್ತದೆ.

by Dynamic Leader
28/07/2026
in ರಾಜ್ಯ
0
0
SHARES
0
VIEWS
Share on FacebookShare on Twitter

ಖಾಸಿಂ ಸಾಬ್. ಎ, ಚಿಂತಕರು, ಬೆಂಗಳೂರು.

ಭಾರತದಂತಹ ಭವ್ಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಮಾಜದಲ್ಲಿ ಇತರೆ ಧರ್ಮ, ಸಮುದಾಯಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹೇಳಿಕೆಗಳು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜಕೀಯ ಲಾಭ ಪಡೆಯುವ ಪ್ರಯತ್ನಗಳು ಮತ್ತು ನಂತರ ಅವುಗಳನ್ನು ನಿರಾಕರಿಸುವ ರಾಜಕೀಯ ಸಂಸ್ಕೃತಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ಬಿಜೆಪಿಯ ಸಿ.ಟಿ.ರವಿ ಅವರ ಹೇಳಿಕೆಗಳು ಮತ್ತು ಅದರ ಸುತ್ತ ಉದ್ಭವಿಸಿರುವ ವಿವಾದವು ಈ ಪ್ರಶ್ನೆಯನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿಸಿದೆ.

ರಾಜ್ಯ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸಿ.ಟಿ.ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸತ್ಯವನ್ನು ಮರೆಮಾಚಲು ಸುಳ್ಳಿನ ಮೇಲೆ ಸುಳ್ಳು ಕಟ್ಟಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದು ರಾಜಕೀಯ ವಾಕ್ಸಮರದ ಭಾಗವಾಗಿದ್ದರೂ, ಇದರಾಚೆಗೆ ಗಮನಿಸಬೇಕಾದ ದೊಡ್ಡ ಪ್ರಶ್ನೆಯೆಂದರೆ ಸಾರ್ವಜನಿಕ ಜೀವನದಲ್ಲಿ ರಾಜಕೀಯ ನಾಯಕರ ಭಾಷೆ ಎಷ್ಟು ಜವಾಬ್ದಾರಿಯುತವಾಗಿರಬೇಕು ಎಂಬುದು.

ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ “ಮುಲ್ಲಾಗೂ ನೀಟ್‌ಗೂ ಏನು ಸಂಬಂಧ” ಎಂಬ ರೀತಿಯ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾದವು. ಶಿಕ್ಷಣ, ಪರೀಕ್ಷಾ ಅಕ್ರಮ ಅಥವಾ ವಿದ್ಯಾರ್ಥಿಗಳ ಸಮಸ್ಯೆಯಂತಹ ರಾಷ್ಟ್ರೀಯ ವಿಷಯಗಳನ್ನು ಧಾರ್ಮಿಕ ಗುರುತಿನೊಂದಿಗೆ ಜೋಡಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಸಂವಾದಕ್ಕೆ ಪೂರಕವಲ್ಲ. ಯಾವುದೇ ವಿಷಯವನ್ನು ಹಿಂದೂ-ಮುಸ್ಲಿಂ ಚೌಕಟ್ಟಿನಲ್ಲಿ ನೋಡುವ ಪ್ರವೃತ್ತಿ  ಸಮಾಜ ಘಾತುಕವಾದದ್ದು.

ಇತ್ತೀಚಿನ ನೀಟ್ ವಿರೋಧಿ ಪ್ರತಿಭಟನೆಗಳಲ್ಲಿ ಬಂಧಿತರಾದವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು ಎಂಬ ಸಂಗತಿಯನ್ನು ಕೆಲವರು ಪ್ರಸ್ತಾಪಿಸಿದ್ದಾರೆ. ಆದರೆ ಬಂಧನಗಳ ಕಾನೂನುಬದ್ಧತೆ ಮತ್ತು ತನಿಖೆಯ ನ್ಯಾಯಸಮ್ಮತತೆಯನ್ನು ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ನಿರ್ಧರಿಸಬೇಕು. ಯಾವುದೇ ಸಮುದಾಯವನ್ನು ಕೇವಲ ಅದರ ಧಾರ್ಮಿಕ ಗುರುತಿನ ಆಧಾರದ ಮೇಲೆ ಅಪರಾಧಿಯನ್ನಾಗಿ ಚಿತ್ರಿಸುವುದು ಅಥವಾ ಅಂತಹ ಭಾವನೆ ಮೂಡಿಸುವುದು ಸಂವಿಧಾನದ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ.

ಇದೇ ಸಂದರ್ಭದಲ್ಲಿ, ಅಸ್ಲಮ್ ಮತ್ತು ಜುನೈದ್ ಸೇರಿದಂತೆ ದ್ವೇಷದ ವಾತಾವರಣದಲ್ಲಿ ನಷ್ಟಕೊಂಡವರ ಘಟನೆಗಳು ಮತ್ತೆ ನೆನಪಾಗುತ್ತವೆ. ಇಂತಹ ಘಟನೆಗಳು ಕೇವಲ ವ್ಯಕ್ತಿಗಳ ಜೀವನವನ್ನಷ್ಟೇ ಕಸಿದುಕೊಳ್ಳುವುದಿಲ್ಲ, ಸಮಾಜದ ಪರಸ್ಪರ ವಿಶ್ವಾಸವನ್ನೂ ದುರ್ಬಲಗೊಳಿಸುತ್ತವೆ. ಆದ್ದರಿಂದ ದ್ವೇಷದ ಭಾಷಣಗಳು ಕೊನೆಗೆ ಯಾವ ರೀತಿಯ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನು ರಾಜಕೀಯ ನಾಯಕರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಸಿ.ಟಿ.ರವಿ ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ; ಸುಳ್ಳಿನ ಮೇಲೆ ಸುಳ್ಳು ಕಟ್ಟುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ
ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ “ನಾನು ಆ ಅರ್ಥದಲ್ಲಿ ಹೇಳಿಲ್ಲ”, “ಇದು ನನ್ನ ವಿರುದ್ಧದ ಷಡ್ಯಂತ್ರ” ಅಥವಾ “ನನ್ನ ಮಾತನ್ನು ತಿರುಚಲಾಗಿದೆ” ಎಂಬ ಸಮರ್ಥನೆಗಳು ಹೊಸದೇನಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಸ್ಪಷ್ಟೀಕರಣ ನೀಡುವ ಹಕ್ಕಿದೆ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಅಂತಿಮ ನಿರ್ಧಾರವನ್ನು ವೈಯಕ್ತಿಕ ಸಮರ್ಥನೆಗಿಂತ ಲಭ್ಯವಿರುವ ಸಾಕ್ಷ್ಯಗಳು, ಸಂಪೂರ್ಣ ಸಂದರ್ಭ ಮತ್ತು ತನಿಖೆಯ ಆಧಾರದ ಮೇಲೆ ಮಾಡಬೇಕು.

ರಾಜಕೀಯ ನಾಯಕರು ತಮ್ಮ ಮಾತಿನ ಪರಿಣಾಮದ ಹೊಣೆಗಾರಿಕೆಯನ್ನು ಸಹ ಹೊರಬೇಕು. ಈ ಸಂಧರ್ಭದಲ್ಲಿ ಸರಕಾರಕ್ಕೆ ಕೇಳಲೇ ಬೇಕಿರುವ ಇನ್ನೊಂದು ಪ್ರಮುಖ ಪ್ರಶ್ನೆ ಎಂದರೆ, ಕೋಮು ದ್ವೇಷ ಪ್ರಚೋದಿಸುವ ಹೇಳಿಕೆಗಳ ವಿರುದ್ಧ ಕಾನೂನು ಜಾರಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು. ಭಾರತದಲ್ಲಿ ದ್ವೇಷ ಭಾಷಣ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಪ್ರಯತ್ನ ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಹೇಳಿಕೆಗಳ ಕುರಿತು ಭಾರತೀಯ ನ್ಯಾಯ ಸಂಹಿತೆ (BNS) ಸೇರಿದಂತೆ ವಿವಿಧ ಕಾನೂನುಗಳಲ್ಲಿ ಕ್ರಮ ಕೈಗೊಳ್ಳುವ ಅವಕಾಶಗಳಿವೆ. ಆದರೆ ಈ ಕಾನೂನುಗಳು ಎಲ್ಲರ ಮೇಲೂ ಸಮಾನವಾಗಿ, ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪ್ರಭಾವವನ್ನು ಲೆಕ್ಕಿಸದೆ ಜಾರಿಯಾಗುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ದ್ವೇಷದ ಭಾಷಣಗಳಿಗೆ ಕಾನೂನು ಕ್ರಮ ವಿಳಂಬವಾದಾಗ ಅಥವಾ ಆಯ್ದ ಪ್ರಕರಣಗಳಲ್ಲಿ ಮಾತ್ರ ಕ್ರಮ ಜರುಗಿದಂತೆ ಕಂಡಾಗ, ಜನರಲ್ಲಿ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ಉಂಟಾಗಬಹುದು. ಆದ್ದರಿಂದ ತನಿಖಾ ಸಂಸ್ಥೆಗಳು ಪಾರದರ್ಶಕತೆ, ನಿಷ್ಪಕ್ಷಪಾತತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.

ಇಂದು ಭಾರತದ ರಾಜಕೀಯದಲ್ಲಿ ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಬೆಲೆ ಏರಿಕೆ ಮತ್ತು ಯುವಜನರ ಭವಿಷ್ಯದಂತಹ ಮೂಲಭೂತ ಪ್ರಶ್ನೆಗಳಿಗಿಂತ ಧಾರ್ಮಿಕ ಧ್ರುವೀಕರಣವೇ ಹೆಚ್ಚು ಚರ್ಚೆಯಾಗುತ್ತಿರುವುದು ಕಳವಳಕಾರಿಯ ಬೆಳವಣಿಗೆಯಾಗಿದೆ. ಚುನಾವಣೆಗಳು ಹತ್ತಿರವಾದಾಗ ಧಾರ್ಮಿಕ ಗುರುತುಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವ ಪ್ರವೃತ್ತಿ ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕುಗ್ಗಿಸುತ್ತದೆ.

ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಘನತೆಯ ಬದುಕಿನ ಹಕ್ಕನ್ನು ನೀಡಿದೆ. ಈ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಕೇವಲ ನ್ಯಾಯಾಲಯಗಳು ಅಥವಾ ಸರ್ಕಾರದ ಮೇಲಷ್ಟೇಯಲ್ಲ ರಾಜಕೀಯ ಪಕ್ಷಗಳು, ನಾಯಕರು, ಮಾಧ್ಯಮಗಳು ಮತ್ತು ನಾಗರಿಕ ಸಮಾಜದ ಮೇಲೂ ಇದೆ.

ರಾಜಕೀಯದಲ್ಲಿ ತೀಕ್ಷ್ಣ ಟೀಕೆಗಳು ಇರಬಹುದು. ಆದರೆ ಆ ಟೀಕೆಗಳು ವ್ಯಕ್ತಿಯ ನೀತಿ, ಆಡಳಿತ ಅಥವಾ ನಿರ್ಧಾರಗಳ ಮೇಲೆ ಇರಬೇಕು. ಧರ್ಮ, ಜಾತಿ ಅಥವಾ ಸಮುದಾಯದ ವಿರುದ್ಧ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿ ಇರಬಾರದು. ಈ ಸತ್ಯವನ್ನು ರವಿಯಂತಹ ಕೋಮುವ್ಯಾದಿ ನಾಯಕರು ಮನಗಂಡರೆ ಉತ್ತಮ. ಏಕೆಂದರೆ ಒಂದು ದ್ವೇಷದ ಮಾತು ಸಾವಿರಾರು ಜನರ ಮನಸ್ಸಿನಲ್ಲಿ ಅನುಮಾನ ಮತ್ತು ಭಯವನ್ನು ಬಿತ್ತಬಹುದು.

ಪ್ರಜಾಪ್ರಭುತ್ವದಲ್ಲಿ ಸಂವಾದ, ಭಿನ್ನಾಭಿಪ್ರಾಯಗಳೆ ಇದರ ಶಕ್ತಿ.  ಸತ್ಯ, ನ್ಯಾಯ, ನೈತಿಕತೆ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯುವ ರಾಜಕೀಯವೇ ದೇಶವನ್ನು ಬಲಪಡಿಸುತ್ತದೆ. ಯಾವುದೇ ರಾಜಕೀಯ ನಾಯಕನಾಗಲಿ, ಯಾವುದೇ ಪಕ್ಷವಾಗಲಿ  ಅವರ ಮಾತುಗಳು ಸಮಾಜದಲ್ಲಿ ದ್ವೇಷ, ವಿಭಜನೆ ಅಥವಾ ಹಿಂಸೆಗೆ ಕಾರಣವಾಗುವಂತಿದ್ದರೆ ಅದರ ಬಗ್ಗೆ ಕಾನೂನುಬದ್ಧ ಹಾಗೂ ನಿಷ್ಪಕ್ಷಪಾತ ಪರಿಶೀಲನೆ ನಡೆಯಲೇಬೇಕು. ಅದೇ ಪ್ರಜಾಪ್ರಭುತ್ವದ ಆತ್ಮ, ಅದೇ ಸಂವಿಧಾನದ ಆಶಯ. ಈಗಲಾದರೂ ರವಿ  ಚಾಳಿ ಕಡಿಮೆಯಾಗಲಿ, ಆದರೂ ಉಪ್ಪು ತಿಂದಿದ್ದೀರಿ ನಾಳೆಯಾದರು ನೀರು ಕುಡಿಯಲೇ ಬೇಕು.

Tags: ಕೋಮು ದ್ವೇಷಧಾರ್ಮಿಕ ಭಾವನೆನೀಟ್ ವಿರೋಧಿನೈತಿಕತೆಮುಲ್ಲಾಗೂ ನೀಟ್‌ಗೂ ಏನು ಸಂಬಂಧರಂಪಾಟಸಿ.ಟಿ.ರವಿ
Previous Post

ಸಿ.ಟಿ.ರವಿ ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ; ಸುಳ್ಳಿನ ಮೇಲೆ ಸುಳ್ಳು ಕಟ್ಟುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

Next Post

ಇಂದಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭ!

Next Post

ಇಂದಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭ!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಇರಾನ್‌ನಲ್ಲಿ ‘Code 100’ ಸೇನಾ ಎಚ್ಚರಿಕೆ? ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ!

20/09/2026

KPSC ಹಗರಣ: 23 ವಿಮಾನ ಟಿಕೆಟ್‌ಗೆ ರೂ.11 ಲಕ್ಷ? CID ತನಿಖೆಯಲ್ಲಿ ಸ್ಫೋಟಕ ಮಾಹಿತಿ!

20/09/2026

ಪಶ್ಚಿಮ ಘಟ್ಟ ವಿವಾದ: ಪ್ರಧಾನಿ ಮೋದಿ ಭೇಟಿಗೆ ಸರ್ವಪಕ್ಷ ನಿಯೋಗ!

20/09/2026

ಇಸ್ಲಾಂ ಮತ್ತು ಪೆರಿಯಾರ್

18/09/2026

Recent News

ಇರಾನ್‌ನಲ್ಲಿ ‘Code 100’ ಸೇನಾ ಎಚ್ಚರಿಕೆ? ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ!

20/09/2026

KPSC ಹಗರಣ: 23 ವಿಮಾನ ಟಿಕೆಟ್‌ಗೆ ರೂ.11 ಲಕ್ಷ? CID ತನಿಖೆಯಲ್ಲಿ ಸ್ಫೋಟಕ ಮಾಹಿತಿ!

20/09/2026

ಪಶ್ಚಿಮ ಘಟ್ಟ ವಿವಾದ: ಪ್ರಧಾನಿ ಮೋದಿ ಭೇಟಿಗೆ ಸರ್ವಪಕ್ಷ ನಿಯೋಗ!

20/09/2026

ಇಸ್ಲಾಂ ಮತ್ತು ಪೆರಿಯಾರ್

18/09/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಇರಾನ್‌ನಲ್ಲಿ ‘Code 100’ ಸೇನಾ ಎಚ್ಚರಿಕೆ? ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಆತಂಕ!

20/09/2026

KPSC ಹಗರಣ: 23 ವಿಮಾನ ಟಿಕೆಟ್‌ಗೆ ರೂ.11 ಲಕ್ಷ? CID ತನಿಖೆಯಲ್ಲಿ ಸ್ಫೋಟಕ ಮಾಹಿತಿ!

20/09/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS