• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜ್ಯ

ವಕ್ಫ್ ಅಂಗೀಕಾರ ಅಸಂವಿಧಾನಿಕ: ಮಸೂದೆ ರದ್ದುಪಡಿಸುವಂತೆ ಬೃಹತ್ ಪ್ರತಿಭಟನೆ!

ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯಿದೆ ರದ್ದುಪಡಿಸಿ ಈ ಹಿಂದೆ ಇದ್ದ ವಕ್ಫ್ ಕಾಯಿದೆಯನ್ನು ಮರುಸ್ಥಾಪಿಸುವಂತೆ ಸೂಕ್ತ ಆದೇಶ ಮಾಡಬೇಕು.

by Dynamic Leader
13/04/2025
in ರಾಜ್ಯ
0
0
SHARES
39
VIEWS
Share on FacebookShare on Twitter

ಗಿರೀಶ್ ಕುಮಾರ್, ಯಾದಗಿರಿ

ಯಾದಗಿರಿ: ಲೋಕಸಭೆಯಲ್ಲಿ ಅಸಂವಿಧಾನಿಕವಾಗಿ ಅಂಗೀಕಾರವಾದ ವಕ್ಫ್ ಮಸೂದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೇ ಸಮಯದಲ್ಲಿ ಮಾತನಾಡಿದ ಸೈಯದ ಸೈಯದುದ್ದೀನ ಖಾದ್ರಿ ಅವರು, “ವಕ್ಫ್ ಎನ್ನುವುದು ಮುಸ್ಲಿಂ ಸಮುದಾಯದ  ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಲ್ಲಾಹನ ಹೆಸರಿನಲ್ಲಿ ಮುಸ್ಲಿಂ ಸಮುದಾದವರು ತಮ್ಮ ಸ್ಥಿರ, ಚರ ಆಸ್ತಿಗಳನ್ನು ದಾನ ಮಾಡಿರುವ ಆಸ್ತಿಯಾಗಿದೆ. ಈ ಆಸ್ತಿಯನ್ನು ಮತ್ತೆ ವಾಪಸ್ ಪಡೆಯಲು, ಮಾರಾಟ ಮಾಡಲು ಸಾಧ್ಯವಿಲ್ಲ. ಈ ವಿಷಯದ ಕುರಿತು ಸುಪ್ರಿಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಅಭಿಪ್ರಾಯ ಪಟ್ಟಿದೆ. ಒಮ್ಮೆ ವಕ್ಫ್ ಎಂದು ಘೋಷಿಸಿದ ಆಸ್ತಿಯು ವಕ್ಫ್ ಆಗಿಯೇ ಉಳಿಯುತ್ತದೆ. ಹಾಗಾಗಿ ಕೂಡಲೇ ಈ ಮಸೂದೆ ರದ್ದುಪಡಿಸಬೇಕು” ಎಂದು ಅವರು ಆಗ್ರಹಿಸಿದರು.

“ಎಲ್ಲಾ ಧರ್ಮಗಳಲ್ಲಿರುವಂತೆ ದಾನವು ಪುಣ್ಯದ ಕೆಲಸವೆಂಬ ಭಾವನೆ ಇಸ್ಲಾಂ ಧರ್ಮದಲ್ಲೂ ಇದ್ದು, ಹಿಂದಿನಿಂದಲೂ ಉಳ್ಳವರು ತಮ್ಮ ಆಸ್ತಿಗಳನ್ನು ದೇವರ ಹೆಸರಿನಲ್ಲಿ ದಾನ ಮಾಡುತ್ತಾ ಬಂದಿರುವ ಪರಂಪರೆ ಇದೆ. ಇದು ಅನೇಕ ಮುಸ್ಲಿಂ ಮತ್ತು ಇತರೆ ರಾಷ್ಟ್ರಗಳಲ್ಲಿಯೂ ಪ್ರಚಲಿತದಲ್ಲಿದೆ. ಭಾರತದಲ್ಲಿ ಹಿಂದಿನಿಂದಲೂ ರಾಜರು ಮತ್ತು ಶ್ರೀಮಂತರು ಭೂಮಿ, ಮಹಲು, ಮತ್ತಿತರ ಸಂಪತ್ತನ್ನು ದಾನ ಮಾಡಿದ್ದು ಮಸೀದಿ, ದರ್ಗಾ, ಸ್ಮಶಾನ, ಮದ್ರಾಸಾ, ಬಡವರಿಗೆ ಮನೆ, ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರೆ ಕಲ್ಯಾಣ ಕೆಲಸಗಳಿಗೆ ಉಪಯೋಗಿಸಲ್ಪಡುತ್ತಿದೆ” ಎಂದರು.

“ಮುಸ್ಲಿಮೇತರರು ಮತ್ತು ಇಬ್ಬರು ಸದಸ್ಯರು ಮಹಿಳೆಯರು ಆಗಿರತಕ್ಕದ್ದು. ರಾಜ್ಯ ವಕ್ಫ್ ಮಂಡಳಿಯಲ್ಲಿ ಒಬ್ಬ ಹಿಂದುಳಿದ ವರ್ಗದ ಮುಸಲ್ಮಾನರು ಆಗಿರಬೇಕು. ವಿವಾದಿತ ವಕ್ಫ್ ಸ್ವತ್ತುಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಉನ್ನತ ಅಧಿಕಾರಿಗಳನ್ನು ನೇಮಿಸಿ ಅವರಿಂದ ತೀರ್ಮಾನಗಳನ್ನು ಪಡೆದುಕೊಳ್ಳುವುದು. ಆ ಅಧಿಕಾರಿಯು ಸಂಬಂಧಿಸಿದ ಭೂಮಿ ಅಥವಾ ಕಟ್ಟಡವು ವಕ್ಫ್ ಸಂಬಂದಿತವೇ ಅಲ್ಲವೇ ಎಂದು ತೀರ್ಮಾನಿಸುತ್ತಾರೆ. ಕನಿಷ್ಠ ಐದು ವರ್ಷ ಇಸ್ಲಾಂ ಅನುಸರಿಸುತ್ತಿರುವ ವ್ಯಕ್ತಿಗಳು ಮಾತ್ರ ವಕ್ಫದಾನ ಮಾಡಬೇಕೆಂಬ ತಿದ್ದುಪಡಿಯು ತೀವ್ರ ಟೀಕೆಗೆ ಒಳಗಾಗಿದೆ. ಇಸ್ಲಾಂ ಧರ್ಮದ ಅನುಯಾಯಿ ಎಂದು ಗುರುತಿಸಲು ಯಾವ ವ್ಯಾಖ್ಯಾನ ಮತ್ತು ಮಾನದಂಡಗಳಿವೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ” ಎಂದರು.

ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ್ಯ ಎಲ್ಲಾ ಧರ್ಮಿಯರಿಗೂ ಅನ್ವಯಿಸುವ ಕಾರಣ, ತಮಗಿಷ್ಟ ಬಂದ ಧರ್ಮಕ್ಕೆ ದೇಣಿಗೆ ನೀಡುವ ಹಕ್ಕನ್ನು ಎಲ್ಲರಿಗೂ ಸಂವಿಧಾನವು ಖಾತ್ರಿಗೊಳಿಸಿರುವ ಹಿನ್ನೆಲೆಯಲ್ಲಿ ಇತರೆ ಧರ್ಮಿಯರು ವಕ್ಫ್  ನೀಡುವುದನ್ನು ನಿರ್ಬಂಧಿಸುವುದು ನ್ಯಾಯಸಮ್ಮತವಲ್ಲ. ಯಾವುದೇ ಸರಕಾರಿ ಕಟ್ಟಡಗಳು ವಕ್ಫ್ ಭೂಮಿಯಲ್ಲಿದ್ದರೆ ಅದನ್ನು ವಕ್ಫ್ ಎಂದು ಪರಿಗಣಿಸಲಾಗುದಿಲ್ಲ. ವಕ್ಫ್ ಸಂಬಂಧಿತ ಮುತವಲ್ಲಿಗಳು ಸಚ್ಚಾರಿತ್ರ‍್ಯ ವಂತರಾಗಿರಬೇಕು, ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯಿದೆ ರದ್ದುಪಡಿಸಿ ಈ ಹಿಂದೆ ಇದ್ದ ವಕ್ಫ್ ಕಾಯಿದೆಯನ್ನು ಮರುಸ್ಥಾಪಿಸುವಂತೆ ಸೂಕ್ತ ಆದೇಶ ಮಾಡಬೇಕು” ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಹಮ್ಮದ ರಫೀಕ ಚೌದ್ರಿ, ಸೈಯದ ಪಾಶ ಪಟೇಲ್, ಶೇಖ್ ಕಲೀಮ್ ತವಕಲ್ಲಿ, ಸೈಯದ ಶಫೀವುದ್ದೀನ ಸರಮಸ್ತ ಸೇರಿದಂತೆ ಸಂಘಟನೆಗಳ ಸಾವಿರಾರು ಜನಸಂಖ್ಯೆ ಭಾಗಿಯಾಗಿದ್ದರು.

Tags: MinoritiesWaqfWaqf Amendment BillWaqf Board PropertiesYadgirಅಲ್ಪಸಂಖ್ಯಾತರುಯಾದಗಿರಿವಕ್ಫ್ವಕ್ಫ್ ತಿದ್ದುಪಡಿ ಕಾಯ್ದೆವಕ್ಫ್ ಬೋರ್ಡ್ ಆಸ್ತಿಗಳು
Previous Post

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

Next Post

ರಾಷ್ಟ್ರಪತಿಗೂ ಸುಪ್ರೀಂ ಕೋರ್ಟ್ ಗಡುವು: ಕೇಂದ್ರ ಸರ್ಕಾರ ಪರಿಶೀಲನಾ ಅರ್ಜಿ ಸಲ್ಲಿಸಲು ಯೋಜನೆ?

Next Post

ರಾಷ್ಟ್ರಪತಿಗೂ ಸುಪ್ರೀಂ ಕೋರ್ಟ್ ಗಡುವು: ಕೇಂದ್ರ ಸರ್ಕಾರ ಪರಿಶೀಲನಾ ಅರ್ಜಿ ಸಲ್ಲಿಸಲು ಯೋಜನೆ?

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS